
23rd April 2025
ಬೆಂಗಳೂರು, ಏಪ್ರಿಲ್ ೨೨, (ಕರ್ನಾಟಕ ವಾರ್ತೆ) :-ಪ್ರಸ್ತುತ ದೇಶದಲ್ಲಿ ಹೆಚ್ಚುತ್ತಿರುವ ಆನ್ಲೈನ್ ಹಣಕಾಸು ವಂಚನೆಗಳನ್ನು ತಡೆಯಲು ರಾಜ್ಯದಲ್ಲಿ ಸೈಬರ್ ಅಪರಾಧ ಸಹಾಯವಾಣಿ-೧೯೩೦ ಜೊತೆಗೆ ವೆಬ್ ಬಾಟ್ ಉನ್ನತೀಕರಣ ಮಾಡಲಾಗಿದೆ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕರು ಮತ್ತು ಪೊಲೀಸ್ ಮಹಾ ನೀರಿಕ್ಷಕರಾದ ಅಲೋಕ್ ಮೋಹನ್ ತಿಳಿಸಿದರು.
ಇಂದು ನಗರದ ಮಹಾತ್ಮಗಾಂಧಿ ರಸ್ತೆಯಲ್ಲಿರುವ ಎಡಿಜಿಪಿ ಸಿಎಲ್&ಎಮ್ ಕಾರ್ನರ್ ಹೌಸ್ ಕಚೇರಿಯಲ್ಲಿ ಉನ್ನತೀಕರಿಸಲಾದ ಸೈಬರ್ ಅಪರಾಧ ಸಹಾಯವಾಣಿ-೧೯೩೦ ವೆಬ್ಬಾಟ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಕರ್ನಾಟಕ ರಾಜ್ಯದಲ್ಲಿ ೧೯೩೦ ಸಹಾಯವಾಣಿಯಲ್ಲಿ ಸ್ವೀಕರಿಸಿದ ಕರೆಗಳ ಸಂಖ್ಯೆ ೨೦೨೨ ರಲ್ಲಿ ೧.೩೦ ಲಕ್ಷ ಇದ್ದು, ನಂತರ ೨೦೨೪ ರಲ್ಲಿ ೮.೨೬ ಲಕ್ಷಕ್ಕೆ ಮತ್ತು ೨೦೨೫ ರ ಮೊದಲ ತ್ರೈಮಾಸಿಕದಲ್ಲಿ (ಜನವರಿ-ಮಾರ್ಚ್) ೪.೩೪ ಲಕ್ಷಕ್ಕೆ ಏರಿಕೆಯಾಗಿದೆ ಎಂದು ಹೇಳಿದರು.
ಪ್ರಸ್ತುತ ರಾಜ್ಯದಲ್ಲಿ ಸಾರ್ವಜನಿಕರು ಪ್ರತಿನಿತ್ಯ ಆನ್ಲೈನ್ ಹಣಕಾಸು ವಂಚನೆಗಳಿಗೆ ಒಳಗಾಗುತ್ತಿರುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ತಕ್ಷಣ ಸಾರ್ವಜನಿಕರು ದೂರು ದಾಖಲಿಸಲು ಅನುವಾಗುವಂತೆ ಸೈಬರ್ ಅಪರಾಧ ಸಹಾಯವಾಣಿ-೧೯೩೦ ಹಾಗೂ ವೆಬ್ಬಾಟ್ನ್ನು ಉನ್ನತೀಕರಿಸಲಾಗಿದೆ. ಕರ್ನಾಟಕ ರಾಜ್ಯದಲ್ಲಿ ತುರ್ತು ಸ್ಪಂದನಾ ವ್ಯವಸ್ಥೆಯ (ಇmeಡಿgeಟಿಛಿಥಿ ಖesಠಿoಟಿse Suಠಿಠಿoಡಿಣ Sಥಿsಣem) ಸಾರ್ವಜನಿಕ ಸುರಕ್ಷತಾ ಪ್ರತ್ಯುತ್ತರ ಕೇಂದ್ರವನ್ನು (Pubಟiಛಿ Sಚಿಜಿeಣಥಿ ಂಟಿsತಿeಡಿiಟಿg Poiಟಿಣ) ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು, ಸಂಪರ್ಕ, ಸಾರಿಗೆ ಮತ್ತು ಆಧುನೀಕರಣರವರ ಕಛೇರಿ ಆವರಣದಲ್ಲಿ ಸ್ಥಾಪಿಸಲಾಗಿದ್ದು, ಸದರಿ ೧೯೩೦ ಸಹಾಯವಾಣಿ ಕೇಂದ್ರದಲ್ಲಿ ಆನ್ಲೈನ್ ಹಣಕಾಸು ವಂಚನೆ ಅಪರಾಧಗಳಿಗೆ ಸಂಬAಧಿಸಿದ ದೂರುಗಳನ್ನು ಓಚಿಣioಟಿಚಿಟ ಅಥಿbeಡಿ ಛಿಡಿime ಖeಠಿoಡಿಣiಟಿg Poಡಿಣಚಿಟ (ಓಅಖP) ಮೂಲಕ ದಾಖಲಿಸಲಾಗುತ್ತಿದೆ.
ಈ ರೀತಿಯಲ್ಲಿ ದೂರುದಾರರ ಕರೆಗಳ ಸಂಖ್ಯೆಯು ಏರಿಕೆಯಾಗುತ್ತಿರುವುದರಿಂದ, ಹೆಚ್ಚು ಸಂಖ್ಯೆಯ ಕರೆಗಳು ಕಡಿತಗೊಂಡಿರುವುದು (ಅಚಿಟಟ ಆಡಿoಠಿs) ಕಂಡುಬAದಿರುತ್ತದೆ. ಇದರಲ್ಲಿ ಹೆಚ್ಚಿನ ಪ್ರಮಾಣದ ಕರೆಗಳು ತಮ್ಮ ದೂರಿನ ಸ್ಥಿತಿ ವಿಚಾರಣೆ (Sಣಚಿಣus eಟಿquiಡಿಥಿ) ಮತ್ತು ಸೈಬರ್ ಅಪರಾಧದ ಕುಂದುಕೊರತೆಗಳಿಗೆ ಸಂಬAಧಿಸಿದ ಕರೆಗಳಾಗಿದ್ದು, ಎಲ್ಲಾ ಕರೆ ಸ್ವೀಕರಿಸುವ ಸಿಬ್ಬಂದಿಗಳು ಕಾರ್ಯನಿರತರಾಗಿರುತ್ತಿದ್ದ ಕಾರಣ ೧೯೩೦-ಸಹಾಯವಾಣಿಗೆ ಹೊಸ ದೂರುಗಳನ್ನು ದಾಖಲಿಸುವವರು ಶೀಘ್ರವಾಗಿ ಸಂಪರ್ಕಿಸಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದಾಗಿ ದೂರುದಾರರಿಗೆ ೧೯೩೦-ಸಹಾಯವಾಣಿಯ ಸಂಪರ್ಕ ಸಿಗದೆ ಗೋಲ್ಡನ್ ಅವರ್ ನಲ್ಲಿ ದೂರು ದಾಖಲಿಸಲು ಕಷ್ಟಕರವಾಗುತ್ತಿತ್ತು. ಈ ದೂರುದಾರರಲ್ಲಿ ಹಿರಿಯ ನಾಗರೀಕರು ಸಹ ಕರೆ ಮಾಡುತ್ತಿದ್ದು ೧೯೩೦ ಸಹಾಯವಾಣಿಗೆ ಕರೆ ಮಾಡಿದ ಸಮಯದಲ್ಲಿ ಸಂಪರ್ಕ ಸಿಗದೇ ಆಸಹಾಯಕರಾಗಿದ್ದರು.
ಈ ಸಮಸ್ಯೆಯಿಂದ ಹಣಕಾಸು ವಂಚನೆಗೊಳಗಾದ ದೂರುದಾರರ ಹಣವನ್ನು ಗೋಲ್ಡನ್ ಅವರ್ ನಲ್ಲಿ ಸಂಬAಧಿಸಿದ ಬ್ಯಾಂಕ್ಗಳಲ್ಲಿ ತಡೆಹಿಡಿಯುವ ಪ್ರಕ್ರಿಯೆಯಲ್ಲಿ ವಿಳಂಬವಾಗುತ್ತಿತ್ತು. ಇದರಿಂದಾಗಿ ಸದರಿ ಹಣ ವಂಚಕರ ಖಾತೆಗೆ ವರ್ಗಾವಣೆಯಾಗಲು ಸುಲಭವಾಗುತ್ತಿತ್ತು.
ಈ ಎಲ್ಲಾ ಸಮಸ್ಯೆಗಳನ್ನು ಮನಗಂಡ ಇಲಾಖೆಯು, ಸಮಸ್ಯೆಯನ್ನು ಪರಿಹರಿಸಲು ದೂರುದಾರರ ಕರೆಗಳನ್ನು ಹಣಕಾಸು ಸಂಬAಧಿತ ದೂರುಗಳು, ಹಣಕಾಸೇತರ ಸಂಬAಧಿತ ದೂರುಗಳು (ಉದಾ.: Whಚಿಣsಂಠಿಠಿ/ಈಚಿಛಿebooಞ ಖಾತೆಯ ಹ್ಯಾಕ್ಗಳು ಅಥವಾ Imಠಿeಡಿsoಟಿಚಿಣioಟಿ), ದೂರಿನ ಸ್ಥಿತಿ ವಿಚಾರಣೆಗಳು ಮತ್ತು ಸೈಬರ್ ಅಪರಾಧ ಸಂಬAಧಿತ ಕುಂದುಕೊರತೆ ಕರೆಗಳಾಗಿ ಐವಿಆರ್ ವ್ಯವಸ್ಥೆಯ ಮೂಲಕ ವರ್ಗೀಕರಿಸಲಾಗಿದೆ.
ಇದರಿಂದಾಗಿ ಹೊಸ ದೂರನ್ನು ಸಕಾಲದಲ್ಲಿ ದಾಖಲಿಸುವವರಿಗೆ ಆದ್ಯತೆ ನೀಡಲಾಗಿದೆ ಮತ್ತು ಗಿoiಛಿe ಉuiಜeಜ Webಃಔಖಿ ವ್ಯವಸ್ಥೆಯನ್ನು ಜಾರಿಗೊಳಿಸಲಾಗಿದ್ದು, ದೂರುದಾರರು ವೆಬ್ಬಾಟ್ ಮೂಲಕ ಮಾಹಿತಿ ಸಲ್ಲಿಸಲು ಇಚ್ಚಿಸಿದ್ದಲ್ಲಿ ಎಸ್ಎಂಎಸ್ ಮೂಲಕ ವೆಬ್ಬಾಟ್ ಲಿಂಕ್ ಅನ್ನು ಕಳುಹಿಸಲಾಗುವುದು.
ನಂತರ ಈ ಸಹಾಯವಾಣಿಯ ಸಿಬ್ಬಂದಿಯ ಮೂಲಕ ಸದರಿ ಮಾಹಿತಿಯನ್ನು ಎನ್.ಸಿ.ಆರ್.ಪಿ ಯಲ್ಲಿ ದಾಖಲಿಸಲಾಗುವುದು. ಇದು ಸಾರ್ವಜನಿಕರಿಗೆ ೧೯೩೦ ಸಹಾಯವಾಣಿಯಲ್ಲಿ ದೂರು ಸಲ್ಲಿಸಲು ಹಾಗೂ ಕಾಲ್ ಡ್ರಾಪ್ಗಳನ್ನು ಸಹ ತಡೆಯಲು ಸಹಾಯವಾಗುತ್ತದೆ.
೧೯೩೦ ಸಹಾಯವಾಣಿಯ ಎಲ್ಲಾ ಸಿಬ್ಬಂದಿಗಳು ಕಾರ್ಯನಿರತವಾಗಿದ್ದ ಸಮಯದಲ್ಲಿ ದೂರುದಾರರು ಸ್ವಯಿಚ್ಚೆಯಿಂದ ಕರೆ ಕಡಿತಗೊಳಿಸಿದ ಸಮಯದಲ್ಲೂ ಸಹ ಎಸ್ಎಂಎಸ್ ಮುಖಾಂತರ ಈ ವೆಬ್ಬಾಟ್ ಲಿಂಕ್ ಅನ್ನು ಸದರಿ ದೂರುದಾರರಿಗೆ ಕಳುಹಿಸಲಾಗುವುದು.
೨೦೨೨ ರಲ್ಲಿ ೨೦,೮೯೪ ದೂರುಗಳನ್ನು ಸೈಬರ್ ಕ್ರೈಂ ಸಹಾಯವಾಣಿ-೧೯೩೦ ಮೂಲಕ ಓಚಿಣioಟಿಚಿಟ ಅಥಿbeಡಿ ಅಡಿime ಖeಠಿoಡಿಣiಟಿg Poಡಿಣಚಿಟ (ಓಅಖP) ನಲ್ಲಿ ದಾಖಲಿಸಲಾಗಿದ್ದು, ೨೦೨೪ ರಲ್ಲಿ ೯೭,೯೨೯ ದೂರುಗಳನ್ನು ದಾಖಲಿಸಲಾಗಿತ್ತು. ೨೦೨೨ನೇ ಇಸವಿಯಲ್ಲಿ ವರದಿಯಾದ ಒಟ್ಟು ವಂಚನೆಯ ಮೊತ್ತವು ರೂ.೧೧೩ ಕೋಟಿ ರೂಪಾಯಿಗಳಾಗಿದ್ದು, ನಂತರ ೨೦೨೪ ರಲ್ಲಿ ರೂ.೨,೩೯೬ ಕೋಟಿಗಳಿಗೆ ಏರಿಕೆಯಾಗಿರುತ್ತದೆ. ಈ ಸಂಬAಧ ಸೈಬರ್ ಕ್ರೈಂ ಸಹಾಯವಾಣಿ-೧೯೩೦ ರ ಮೂಲಕ ಬ್ಯಾಂಕ್ಗಳಲ್ಲಿ ತಡೆಹಿಡಿಯಲಾದ ಮೊತ್ತವು ೨೦೨೨ ರಲ್ಲಿ ೮ ಕೋಟಿಗಳಾಗಿದ್ದು, ನಂತರ ೨೦೨೪ ರಲ್ಲಿ ರೂ.೨೨೬ ಕೋಟಿ ವಂಚನೆಯ ಹಣವನ್ನು ತಡೆಹಿಡಿಯಲಾಗಿದೆ. ಸದರಿ ಮೊತ್ತವು ವಂಚನೆಯ ಮೊತ್ತದ ಶೇಕಡಾ ೯ ರಷ್ಟು ಆಗಿರುತ್ತದೆ.
ಈ ಹೊಸ ವ್ಯವಸ್ಥೆಯ ಪರಿಣಾಮದಿಂದಾಗಿ ೨೦೨೫ ರ ಮೊದಲ ತ್ರೈಮಾಸಿಕದಲ್ಲಿ ೩೮,೦೦೦ ಪ್ರಕರಣಗಳನ್ನು ಸೈಬರ್ ಕ್ರೈಂ ಸಹಾಯವಾಣಿ-೧೯೩೦ ಮೂಲಕ ದಾಖಲಿಸಲಾಗಿರುತ್ತದೆ. ಪ್ರಸ್ತುತ ವರ್ಷದಲ್ಲಿ ಮಾರ್ಚ್ ೨೦೨೫ರ ಅಂತ್ಯಕ್ಕೆ ವಂಚನೆ ಹಣದ ಶೇಕಡಾ ೧೬ ರಷ್ಟು ಮೊತ್ತವನ್ನು ಬ್ಯಾಂಕ್ಗಳಲ್ಲಿಯೇ ತಡೆಯುವಲ್ಲಿ ಶ್ರಮವಹಿಸಿರುತ್ತೇವೆ ಎಂದು ಹೇಳಿದರು.
ವೆಬ್ಬಾಟ್ ವ್ಯವಸ್ಥೆ ಜೊತೆಗೆ ಹೊಸ ಸೌಲಭ್ಯಗಳ ವಿವರ:
೧೯೩೦ ಸಹಾಯವಾಣಿಯಲ್ಲಿ ಈ ಹಿಂದಿನ ದೂರವಾಣಿ ಮೂಲಸೌಕರ್ಯವನ್ನು ಬದಲಾಯಿಸಿ SIP ಲೈನ್ಗಳಿಗೆ ಉನ್ನತೀಕರಿಸಲಾಗಿದೆ. ಇದು ಹೆಚ್ಚುತ್ತಿರುವ ದೂರು ಕರೆಗಳ ಪ್ರಮಾಣವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ.
ಭಾಷಾ ಆಯ್ಕೆ Iಗಿಖ (Iಟಿಣeಡಿಚಿಛಿಣive ಗಿoiಛಿe ಖesಠಿoಟಿse) ವ್ಯವಸ್ಥೆಯನ್ನು ಪರಿಚಯಿಸಲಾಗಿದ್ದು, ಈ ವ್ಯವಸ್ಥೆಯು ವಂಚನೆಗೊಳಗಾದ ದೂರುದಾರರ ಸಂವಹನಕ್ಕಾಗಿ ಕನ್ನಡ, ಇಂಗ್ಲೀಷ್ ಅಥವಾ ಹಿಂದಿ ಭಾಷೆಯನ್ನು ಆಯ್ಕೆ ಮಾಡಲು ಅನುವು ಮಾಡಿಕೊಡುತ್ತದೆ.
ವಂಚನೆಗೊಳಗಾದ ದೂರುದಾರರು ೧೯೩೦ ಸಹಾಯವಾಣಿಗೆ ಕರೆ ಮಾಡಿದಾಗ, ಕರೆ ಸ್ವೀಕರಿಸುವ ಎಲ್ಲಾ ಸಿಬ್ಬಂದಿಗಳು ಕಾರ್ಯನಿರತರಾಗಿದ್ದರೆ, ಈ ಸಮಯದಲ್ಲಿ ಐವಿಆರ್ ಮೂಲಕ ದೂರುದಾರರ ಕಿueue Posiಣioಟಿ ಬಗ್ಗೆ ಮಾಹಿತಿ ಒದಗಿಸಲಾಗುತ್ತದೆ.
ಹಣಕಾಸೇತರ ಸಂಬAಧಿತ ದೂರುಗಳಲ್ಲಿ (ಉದಾ.: Whಚಿಣsಂಠಿಠಿ/ಈಚಿಛಿebooಞ ಖಾತೆಯ ಹ್ಯಾಕ್ಗಳು ಅಥವಾ Imಠಿeಡಿsoಟಿಚಿಣioಟಿ) ಸಮಸ್ಯೆಯನ್ನು ಬಗೆಹರಿಸುವ ಬಗೆಗಿನ ಮಾಹಿತಿಯ ಲಿಂಕ್ ಅನ್ನು ಎಸ್ಎಂಎಸ್ ಮುಖಾಂತರ ದೂರುದಾರರಿಗೆ ನೀಡಲಾಗುವುದು.
ವಂಚನೆಗೊಳಗಾದವರು ಮತ್ತು ವಂಚಕರ ಬಗೆಗಿನ ಮಾಹಿತಿಯನ್ನು ಸಹ ಸಂಗ್ರಹಿಸಿ, ಶೇಖರಿಸುವ ವ್ಯವಸ್ಥೆ ಕಲ್ಪಿಸಲಾಗಿದ್ದು, ಈ ಮಾಹಿತಿಯಿಂದ ತನಿಖಾಧಿಕಾರಿಗಳು ಆರೋಪಿಯ ಬಗ್ಗೆ ಹಾಗೂ ವಂಚನೆಗಳ ಬಗ್ಗೆ ವಿಶ್ಲೇಷಿತ ಮಾಹಿತಿಯನ್ನು ಪಡೆಯಬಹುದಾಗಿರುತ್ತದೆ.
ಸೈಬರ್ ಕ್ರೆöÊಂ ಸಹಾಯವಾಣಿ-೧೯೩೦ ವನ್ನು ಮಾನ್ಯ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರಾದ ಎಸ್. ಮುರುಗನ್ ಐಪಿಎಸ್ ರವರ ಮಾರ್ಗದರ್ಶನದಲ್ಲಿ ಸುಧಾರಿತ ಸಾಫ್ಟ್ವೇರ್ ಹಾಗೂ ಮೂಲ ಸೌಕರ್ಯದೊಂದಿಗೆ ಅಂದಾಜು ವೆಚ್ಚ ೦೧ ಕೋಟಿ ರೂಗಳಲ್ಲಿ ಉನ್ನತೀಕರಿಸಲಾಗಿದ್ದು, ಇದರಿಂದ ಹಣಕಾಸು ವಂಚನೆಗೊಳಗಾದ ಸಾರ್ವಜನಿಕರಿಗೆ ಉತ್ತಮ ಸೇವೆಯನ್ನು ಒದಗಿಸುವುದಾಗಿದೆ.
೧೯೩೦ ಸಹಾಯವಾಣಿಯು ಸೈಬರ್ ಅಪರಾಧಗಳಿಗೆ ಒಳಗಾದ ನಾಗರೀಕರಿಗೆ ದಿನದ ೨೪ ಗಂಟೆಗಳ ಕಾಲವೂ ಉತ್ತಮ ಸೇವೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ.
ಕಾರ್ಯಕ್ರಮದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಎಡಿಜಿಪಿ ಹಿತೇಂದ್ರ, ಆಡಳಿತ ವಿಭಾಗದ ಎಡಿಜಿಪಿ ಸೌಮೆಂದು ಮುಖರ್ಜಿ, ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕರು ಹಾಗೂ ಹೆಚ್ಚುವರಿ ಮಹಾ ನಿರ್ದೇಶಕರಾದ ನಂಜುAಡಸ್ವಾಮಿ ಹಾಗೂ ಡಿಜಿಪಿ ಶ್ರೀಮತಿ ಮಾಲಿನಿ ಕೃಷ್ಣಮೂರ್ತಿ ಸೇರಿದಂತೆ ಅನೇಕ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಏ.24 ರಂದು ಡಾ.ರಾಜ್ ಕುಮಾರ್ ಜನ್ಮದಿನಾಚರಣೆ ಅಂಗವಾಗಿ ಕನ್ನಡ ಚಲನಚಿತ್ರ ಗೀತೆಗಳ ಗಾಯನ ಕಾರ್ಯಕ್ರಮ
ಅಲೆಮಾರಿ ಸಮುದಾಯ ಜನರಿಗೆ ಸರ್ಕಾರ ಸಾಕಷ್ಟು ಯೋಜನೆ ರೂಪಿಸಲಾಗಿದೆ ಜಾಗೃತಿ ಮೂಡಿಸಿ ಸವಲತ್ತು ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು -ಪಲ್ಲವಿ ಜಿ.